"ನೌಕರರ ಡೇಟಾ ವ್ಯವಸ್ಥೆಗೆ ಸ್ವಾಗತ. ನೌಕರರ ಎಲ್ಲಾ ವಿಧದ ರಜೆ ಮಂಜೂರಾತಿ,ಕಾಲಮಿತಿ ವೇತನಬಡ್ತಿ, ಖಾಯಂ ಪೂರ್ವ ಸೇವಾವಧಿ ಘೋಷಣೆ, ವಾರ್ಷಿಕ ಕಾರ್ಯನಿರ್ವಹಣಾ ವರದಿ,ಎಲ್ಲಾ ವಿಧದ ನಿರಾಕ್ಷೇಪಣಾ ಪ್ರಮಾಣ ಪತ್ರ ಹಾಗೂ ಇನ್ನಿತರ ಸೇವೆಗಳು ಈಗ ಸುಲಭವಾಗಿ ಆನ್‌ಲೈನ್‌ ಮೂಲಕ ಲಭ್ಯ "

ಶಿಕ್ಷಣಕ್ಕೆ ಸಂಬಂಧಿಸಿದ ಮೊಬೈಲ್ ಆ್ಯಪ್ ಗಳು.

(ಅತೀ ಹೆಚ್ಚು ಮೊಬೈಲ್ ಬಳಕೆ ಕಲಿಕೆಗೆ ಮಾರಕವಾಗಬಹುದು)

(ಈ ಆ್ಯಪ್ ಗಳ ಬಳಕೆಯ ಬಗ್ಗೆ ತಿಳಿಯಲು ಕರೆ ಮಾಡಿ 9481414387)

 🌑Solar Walk Lite- ಸೌರವ್ಯೂಹದ ಸಂಪೂರ್ಣ ಮಾಹಿತಿ ನೀಡುವ ಆ್ಯಪ್.(ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಅಧ್ಯಯನಕ್ಕೆ ಉಪಯೋಗ)

  🌑DigiLocker-ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಹಾಗೂ ಆಧಾರ್ ಲಿಂಕ್ ಆಗಿರುವ ಇತರೆ ಪ್ರಮಾಣ ಪತ್ರಗಳನ್ನು ಪಡೆಯುವ ಆ್ಯಪ್.(ಕೇಂದ್ರ ಸರ್ಕಾರದಿಂದ)

 🌑DIKSHA- ಪಠ್ಯವಿಷಯಗಳನ್ನು ಒಳಗೊಂಡ ಉಪಯುಕ್ತ ಆ್ಯಪ್.(ಎಲ್ಲಾ ಪಠ್ಯವಿಷಯ ಅಧ್ಯಯನ ಕ್ಕೆ ಉಪಯೋಗ)

 🌑Bacteria- ಬ್ಯಾಕ್ಟೀರಿಯಾ ಬಗ್ಗೆ ಮಾಹಿತಿ ನೀಡುವ 3D ಆ್ಯಪ್.(ಜೀವ ಶಾಸ್ತ್ರ ಅಧ್ಯಯನ ಕ್ಕೆ ಉಪಯೋಗ)

  🌑Internal organs in 3d- ಮಾನವನ ದೇಹ ರಚನೆಯ ಬಗ್ಗೆ 3D ಆ್ಯಪ್.(ಜೀವ ಶಾಸ್ತ್ರ ಅಧ್ಯಯನ ಕ್ಕೆ ಉಪಯೋಗ)

 🌑DISHANK- ಭೂ ದಾಖಲೆಗಳನ್ನು ಒಳಗೊಂಡ ಆ್ಯಪ್(ರಾಜ್ಯ ಸರ್ಕಾರದಿಂದ)

 🌑GoogleEarth- ಪ್ರಪಂಚದ ಪ್ರಸಿದ್ಧ ಸ್ಥಳಗಳ ಉಪಗ್ರಹ ಆಧಾರಿತ ವೀಕ್ಷಣೆ ಮಾಡುವ ಆ್ಯಪ್.(ಸಮಾಜ ವಿಜ್ಞಾನ ಅಧ್ಯಯನ ಕ್ಕೆ ಉಪಯೋಗ)

 🌑Camscanner- ಉಪಯುಕ್ತ ದಾಖಲೆ ಹಾಗೂ ಮಾಹಿತಿಗಳನ್ನು ಸ್ಕ್ಯಾನ್ ಮಾಡಿಕೊಳ್ಳುವ ಆ್ಯಪ್.(ದಿನಪತ್ರಿಕೆ ಗಳಲ್ಲಿನ ಉಪಯುಕ್ತ ಮಾಹಿತಿಗಳನ್ನು ಹಾಗೂ ಪಠ್ಯ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪ್ರಿಂಟ್ ತೆಗೆದುಕೊಳ್ಳಲು ಬಳಸುವ ಆ್ಯಪ್.)

 🌑News on air- ದೇಶದ ಎಲ್ಲಾ ಆಕಾಶವಾಣಿ ಕೇಂದ್ರಗಳನ್ನು ಒಳಗೊಂಡ ಆ್ಯಪ್.(ದಿನನಿತ್ಯದ ಸುದ್ದಿಸಮಾಚಾರವನ್ನು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷಾ ತಯಾರಿ ಸಂಬಂಧ ಪರೀಕ್ಷಾ ಕೇಂದ್ರ ನಡೆಸಿಕೊಡುವ ಕಾರ್ಯಕ್ರಮವನ್ನು ವೀಕ್ಷಿಸಲು)

🌑Justkannada-ಜಸ್ಟ್ ಕನ್ನಡ- ಮೊಬೈಲ್ ನಲ್ಲಿ ಸರಳವಾಗಿ ಕನ್ನಡ ಟೈಪ್ ಮಾಡಲು ಈ ಆ್ಯಪ್ ಬಳಸಬಹುದು.