⭐ಸಮಾಜ ವಿಜ್ಞಾನ ಹಾಗೂ ಗಣಿತ ಕ್ಕೆ ಸಂಬಂಧಿಸಿದ ಸಹಪಠ್ಯ ಚಟುವಟಿಕೆಗಳು
(ದಿನಾಂಕ:17-01-2020)
ದಿನಾಂಕ:17-01-2020 ರಂದು ಎಸ್.ಎಸ್.ಎಲ್.ಸಿ.ಯ ಎಲ್ಲಾವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ವಿಷಯದ ರಂಗೋಲಿಯ ಮೂಲಕ ಭಾರತದ ಭೂಪಟ ರಚನೆ ಹಾಗೂ ಸ್ಥಳಗಳನ್ನು ಗುರುತಿಸುವ ಸ್ಪರ್ಧೆ ಹಾಗೂ ಗಣಿತ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿಶೇಷವೆಂದರೆ ಮೈಸೂರಿನ ಸಿ.ಟಿ.ಇ. ನಲ್ಲಿ ರೀಡರ್ ಆಗಿ ಸೇವೆ ಸಲ್ಲಿಸುತ್ತಿರುವ , ನಮ್ಮ ನೆಚ್ಚಿನ ಅಧಿಕಾರಿಗಳೂ ಆದ ಶ್ರೀಮತಿ ಮಂಜುಳಾ ಮೇಡಂ ರವರು ಬೆಳಿಗ್ಗೆಯಿಂದಲೂ ನಮ್ಮ ಶಾಲೆಯ ವಿದ್ಯಾರ್ಥಿಗಳೊಂದಿಗೇ ಇದ್ದು, ವಿದ್ಯಾರ್ಥಿಗಳ ಪ್ರತಿಯೊಂದೂ ಚಟುವಟಿಕೆಗಳನ್ನು ಗಮನಿಸಿ, ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಮ್ಮ ಅಮೂಲ್ಯ ಸಲಹೆ,ಸೂಚನೆಗಳನ್ನು ನೀಡಿದರು. ಹಾಗೂ ನಂತರದಲ್ಲಿ ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಸೇರಿಕೊಂಡ ಶ್ರೀ ಪ್ರಶಾಂತ್ ಸರ್ ರವರು ಉಪನ್ಯಾಸಕರು, ಡಯಟ್, ಮೈಸೂರು ಇವರು ನಮ್ಮ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ, ಗಣಿತ ಆಕೃತಿಗಳನ್ನು ರಂಗೋಲಿಯ ಮೂಲಕ ಬಿಡಿಸುವ ಸ್ಪರ್ಧೆ- ಎಸ್.ಎಸ್.ಎಲ್. ಸಿ. ಯ ಎಲ್ಲಾ ವಿದ್ಯಾರ್ಥಿಗಳಿಗೆ
(ದಿನಾಂಕ:06-01-2020)
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಸಾಮೂಹಿಕ ವಾಗಿ ಗ್ರಾಫ್ ಬಿಡಿಸುತ್ತಿರುವುದು.
(ದಿನಾಂಕ:12-11-2020)