ಸ್ವಾತಂತ್ರ್ಯ ದಿನಾಚರಣೆ 2019
ಸ್ವಾತಂತ್ರ್ಯ ದಿನಾಚರಣೆ 2019
ದಿನಾಂಕ:15-08-2019 ರಂದು 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿನಿಯರ ಪ್ರತ್ಯೇಕವಾದ ಪಿರಮಿಡ್ ರಚನೆ, ಸಾಮೂಹಿಕ ಯೋಗಾಸನ, ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿನಿಯರ ನೃತ್ಯ, ರಾಷ್ಟ್ರೀಯ ನಾಯಕರ ಛದ್ಮವೇಶ, ರಾಷ್ಟ್ರೀಯತೆಯ ಬಗ್ಗೆ ಕಿರು ನಾಟಕ ಹಾಗೂ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನದ ಮಹತ್ವ ಕುರಿತ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಕಿರು ಭಾಷಣ ಇತ್ಯಾದಿ.
ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿನಿಯರಿಗೆ ತಲಾ 5,000/- ರೂ. ಗಳ ಚೆಕ್ಕನ್ನು ಶ್ರೀ ಜಗದೀಶ್ ವಕೀಲರು, ಇವರು ನೀಡಿದರು. ಹಾಗೂ ಹಾಲು ಉತ್ಪಾದಕರ ಸಂಘದಿಂದ ತಲಾ 1,000/- ರೂ. ಹಾಗೂ ಶ್ರೀ ಗೋವಿಂದಾಚಾರ್ ಆರ್.ಎಂ.ಪಿ ಯವರಿಂದ ತಲಾ 500/- ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಸೋಮಣ್ಣರವರಿಂದ ಒಟ್ಟು 20 ಡಿಕ್ಷನರಿ ಗಳನ್ನು ವಿತರಿಸಲಾಯಿತು.